ಹಾಸನ : ಭಾರೀ ಮಳೆ ಹಾಗೂ ಬಿರುಗಾಳಿಯಿಂದ ಹಾನಿಗೊಳಗಾದ ಸಕಲೇಶಪುರ ಮತ್ತು ಆಲೂರು ತಾಲೂಕಿನ ಗ್ರಾಮಗಳಲ್ಲಿ ನಾಳೆ ಸಂಜೆ ಒಳಗೆ ವಿದ್ಯುತ್ ಸಂಪರ್ಕ ಮರುಸ್ಥಾಪಿಸಬೇಕು ಎಂದು ಶಾಸಕ ಸಿಮೆಂಟ್ ಮಂಜು ಸೆಸ್ಕ್ ಹಾಗೂ ಕೆಪಿಟಿಸಿಎಲ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಸಕಲೇಶಪುರದಲ್ಲಿ 219 ಹಾಗೂ ಆಲೂರಿನಲ್ಲಿ 80ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಹಾನಿ
ಸಿಬ್ಬಂದಿ ಕೊರತೆ ನೀಗಿಸಲು 40 ಸಿಬ್ಬಂದಿ ಸಕಲೇಶಪುರಕ್ಕೆ, 8 ಸಿಬ್ಬಂದಿ ಆಲೂರಿಗೆ ನಿಯೋಜನೆ
ಸಾರ್ವಜನಿಕರ ಕರೆಗಳಿಗೆ ಅಧಿಕಾರಿಗಳು ಕಡ್ಡಾಯವಾಗಿ ಸ್ಪಂದಿಸಬೇಕು ಎಂದು ಸೂಚನೆ
ರೋಗಿಗಳು, ವಿದ್ಯಾರ್ಥಿಗಳು ಹಾಗೂ ಗರ್ಭಿಣಿಯರಿಗೆ ತೊಂದರೆಯಾಗದಂತೆ ತ್ವರಿತ ಕಾಮಗಾರಿ ನಡೆಸಲು ನಿರ್ದೇಶನ
ಅಗತ್ಯವಿದ್ದರೆ ಹೊರ ತಾಲೂಕುಗಳಿಂದಲೂ ಸಿಬ್ಬಂದಿ ಕರೆಸಿ ಕಾಮಗಾರಿ ಪೂರ್ಣಗೊಳಿಸಲು ಸೂಚನೆ
ಸಂಕಷ್ಟದ ಸಮಯದಲ್ಲಿ ಜಂಗಲ್ ಕ್ಲಿಯರೆನ್ಸ್ ಹಾಗೂ ವಿದ್ಯುತ್ ಕಾಮಗಾರಿಗೆ ಸಹಕರಿಸುತ್ತಿರುವ ಗ್ರಾಮಸ್ಥರ ಸೇವೆಯನ್ನು ಶಾಸಕರು ಶ್ಲಾಘಿಸಿದರು.
